ಭೂವಿಯ ಉಪದೇಶ Leave a Comment / Blog / By Noorul Falah ಭೂಮಿಯ ಉಪದೇಶಅನಸುಬುನು ಮಾಲಿಕ್(ರ) ಹೇಳುತ್ತಾರೆ; ಭೂಮಿ ಯಾವಾಗಲೂ ಹತ್ತು ಕಾರ್ಯ ಕೂಗಿ ಹೇಳುತ್ತದೆ.•ಮನುಷ್ಯ, ನನ್ನ ಮೇಲೆ ನೀನು ಓಡಾಡುತ್ತಿ, ನಿನ್ನ ಅಂತ್ಯನನ್ನೊಳಗೆ ಎಂಬುದನ್ನು ನೀ ನೆನಪಿಸು.•ನನ್ನ ಮೇಲೆ ನೀನು ಪಾಪ ಮಾಡುತ್ತಿ, ನನ್ನೊಳಗೆ ನಿನಗೆ ಶಿಕ್ಷೆ ನೀಡಲ್ಪಡುತ್ತದೆ ಎಂಬುದನ್ನು ನೆನಪಿಸು.•ನನ್ನ ಮೇಲೆ ನೀನು ನಕ್ಕು ನಲಿಯುತ್ತಿ. ಆದರೆ ನನ್ನೊಳಗೆಬಂದರೆ ನೀನು ಅತ್ತು ಅತ್ತು ದಿನಕಳೆಯುವುದನ್ನು ನೆನಪಿಸು.•ನನ್ನ ಮೇಲೆ ನೀ ಸಂತೋಷದಿಂದಿರುತ್ತಿ, ನನ್ನೊಳಗೆ ಬಂದರೆನೀನು ದುಃಖದಿಂದ ಕಳೆಯುತ್ತಿ ಎಂಬುದನ್ನು ನೆನಪಿಸು.•ನನ್ನ ಮೇಲೆ ನೀನು ದುಡ್ಡು ಸಂಪಾದಿಸುತ್ತಿ, ಅದರಿಂದಾಗಿ ನನ್ನೊಳಗೆ ಬಂದರೆ ನೀ ಖೇದ ಪಡುತ್ತಿ ಎಂಬುದನ್ನು ನೆನೆಸು.•ನನ್ನ ಮೇಲೆ ನೀ ಹರಾಂ ತಿನ್ನುತ್ತಿ. ನನ್ನೊಳಗೆ ಬಂದರೇ ನಿನ್ನನ್ನುಹುಳುಗಳು ತಿನ್ನುತ್ತವೆ ಎಂಬುದನ್ನು ನೆನೆಸು.•ನನ್ನ ಮೇಲೆ ನೀ ಅಹಂಕಾರದಿಂದ ನಡೆಯುತ್ತಿ. ನನ್ನೊಳಗೆಬಂದರೆ ನೀ ನಿಂದ್ಯವಾಗುತ್ತಿ ಎಂಬುದನ್ನು ನೆನೆಸು.•ನನ್ನ ಮೇಲೆ ನೀನು ಖುಷಿ, ಜೀವನ ಸಾಗಿಸುತ್ತಿ, ನನ್ನೊಳಗೆ ನಿನಗೆ ಕಷ್ಟದ ಜೀವನ ಎಂಬುದನ್ನು ನೆನೆಸು.•ನನ್ನ ಮೇಲೆ ನಿನಗೆ ಪ್ರಕಾಶವಿರಬಹುದು. ನನ್ನೊಳಗೆ ನಿನಗೆ ಕತ್ತಲು ಎಂಬುದನ್ನು ನೆನೆಸು•ನನ್ನ ಮೇಲೆ ನಿನಗೆ ಮಿತ್ರರಿರಬಹುದು. ನನ್ನೊಳಗೆ ನೀ ಏಕಾಂತಎಂಬುದನ್ನು ನೇನೆಸು.ಆಯಿಶಾ ಚಿಕ್ಕಮಗಳೂರು