ಅಹಂಕಾರದಿಂದ ಇಲ್ಮಿನೆಡೆಗೆ

ಅದೊಂದು ದಿನ ಮೊಬೈಲ್‌ನಲ್ಲಿ ಅನ್ನೂರಿಯ್ಯ ಶರೀಅತ್ ಕೋರ್ಸಿನ ಮೊದಲ ಬ್ಯಾಚ್ ಆರಂಭವಾಗುವ ಬಗ್ಗೆ ಮೆಸೇಜ್ ಬಂದಿತ್ತು… ಎಲ್ಲರಂತೆಯೇ ನಾನೂ ಕೂಡ ಕೋರ್ಸಿಗೆ ಜಾಯಿನ್ ಆಗಲು ನಿರ್ಧರಿಸಿದ್ದೆ.. ಆದರೆ ಅದು ಕಲಿಯುವ ಆಸಕ್ತಿಗಿಂತ ಹೆಚ್ಚಾಗಿ ಅನ್ನೂರಿಯ್ಯ ಬಿರುದನ್ನು ಗಿಟ್ಟಿಸಿಕೊಳ್ಳುವ ಸ್ವಾರ್ಥದಿಂದಾಗಿತ್ತು….
ಹಾ, ಹೌದು ನನ್ನಲ್ಲಿದ್ದ ಅಹಂಕಾರ ಮನೋಭಾವ ನಾನು ಎಲ್ಲರಿಗಿಂತ ಹೆಚ್ಚು ಬಿರುದುಗಳನ್ನು ಪಡೆಯಬೇಕು ಅವರಿಗಿಂತ ಜಾಸ್ತಿ ನಾನು ಕಲಿತಿರಬೇಕೆಂಬ ಅಹಂಕಾರ,,,, ಹೀಗೆ ಕ್ಲಾಸ್ ಕೂಡ ಶುರುವಾಗಿತ್ತು ಕಲಿಯುವ ಮನಸ್ಸಿಲ್ಲದಿದ್ದರೂ ಅಟೆಂಡೆನ್ಸ್‌ಗಾಗಿ ಜಾಯಿನ್ ಆಗುತಿದ್ದೆ… ಹೀಗಿರುವಾಗ ಒಂದು ದಿನ ಗಂಭೀರವಾದ ಧ್ವನಿಯೊಂದು ಅಬೂಲಹಬನ ಬಗ್ಗೆ ಆತನ ಸಂಪತ್ತಿನ ಕುರಿತು ಆತನ ಹಾಗೂ ಆತನ ಪತ್ನಿಯ ನಾಶದ ಕುರಿತು ಮಾಡುತ್ತಿದಂತಹ ಸೂರತ್ತು ಮಸದ್‌ನ ಪಾಠವು ನನ್ನ ಕಿವಿಗೆ ಚಾಚು ತಪ್ಪದೆ ಬಿದ್ದಿತ್ತು… ಆ ಧ್ವನಿಯು ನನ್ನನ್ನು ಪಾಠವನ್ನು ಕೇಳಲು ಪ್ರೆರೇಪಿಸಿತು… ಹೀಗೆ ಆ ಶಿಕ್ಷಕಿ ಮಾಡಿದ ಆ ತರಗತಿಯ ನಂತರ ನಾನು ಮನಸಾರೆ ಕುಳಿತು ಎಲ್ಲಾ ತರಗತಿಗಳನ್ನು ಕೇಳಲಾರಾಂಭಿಸಿದೆ… ಅದರ ಪ್ರಾಧ್ಯಾಪಕಿಯರು ಮಾಡುವ ಪ್ರತಿಯೊಂದು ಅಧ್ಯಾಯದಲ್ಲೂ ಇಹಲೋಕದ ನಾಶವನ್ನು ಕುರಿತು ಪರಲೋಕದ ಬಗ್ಗೆ ಇರುವ ವಿವರಣೆಯನ್ನು ಕೇಳುತ್ತಾ ನಂತರ ನನ್ನಲಿ ತುಂಬಾ ಬದಲಾವಣೆಗಳು ನನಗರಿಯದೆ ಶುರುವಾಗಿದ್ದವು… ದಿನಗಳೆದಂತೆ ನನಗೆ ಇನ್ನೂ ಕಲಿಯುವ ಆಸಕ್ತಿ ಬಯಕೆ ಹೆಚ್ಚಾಗುತ್ತಾ ಹೋಯಿತು…
ನನ್ನ ಮನದಲ್ಲಿ ಆ ಎಲ್ಲ ಶಿಕ್ಷಕಿಯರ ತರಗತಿಗಳನ್ನು ಕೇಳುತ್ತಾ ನಾನು ಒಬ್ಬ ಉತ್ತಮ ಪತ್ನಿ, ಉತ್ತಮ ಮಗಳು, ಉತ್ತಮ ಸೊಸೆ ಹಾಗೂ ಮುಖ್ಯವಾಗಿ ಉತ್ತಮ ತಾಯಿಯಗಬೇಕೆಂದು ಒಂದು ಗುರಿ ಹುಟ್ಟಿತ್ತು….
ಅಲ್ ಹಮ್ದುಲಿಲ್ಲಾಹ್ ಮೂರು ತಿಂಗಳ ಕೋರ್ಸ್ ಅಂದರೆ ಕೋರ್ಸಿನ ಮಧ್ಯಾವಧಿಯಲ್ಲಿ ನಿಜವಾಗಿಯೂ ನನ್ನಲ್ಲಿ ಬದಲಾವಣೆ ಆಗಿತ್ತು… ಎಲ್ಲಿಯವರೆಗೆಂದರೆ ಮನೆಯಲ್ಲಿ ಎಲ್ಲರೂ ಕೂಡ ತರಗತಿ ಆರಂಭವಾಗುವ ಸಮಯದಲ್ಲಿ ಗಾಂಭಿರ್ಯತೆಯಿಂದ ಕುಳಿತುಕೊಳ್ಳುತ್ತಾರೆ.. ಇಲ್ಮ್ ಎಂಬುದು ಎಷ್ಟು ಮುಖ್ಯವೋ ಅದನ್ನು ಕಲಿಸುವ ಶಿಕ್ಷಕರ ಮಾತುಗಳು ಕೂಡ ಅಷ್ಟೇ ಪರಿಣಾಮಕಾರಿಯಾಗಿರುತ್ತದೆ, ಉತ್ತಮ ವಿದ್ಯಾರ್ಥಿಯಾಗಲು ಉತ್ತಮ ಶಿಕ್ಷಕಿಯರು ನಮ್ಮೊಂದಿಗಿರಬೇಕು ಎಂಬುದು ನಿಜವಾಗಿಯೂ ಸತ್ಯ.. ಎಲ್ಲರಿಗೂ ಜೀವನದಲ್ಲಿ ಒಳ್ಳೆಯ ಪಾಠವನ್ನು ಕಲಿಸಲು ಇಂತಹ ಓರ್ವ ಶಿಕ್ಷಕಿಯರು ಇರಬೇಕು… ಆ ಬದಲಾವಣೆಗೆ ಕಾರಣವಾದ ಆ ಶಿಕ್ಷಕಿಯರಿಗೆ ಹಾಗೂ ಅನ್ನೂರಿಯ್ಯದ ಆಡಳಿತ ಮಂಡಳಿಗೂ ನನ್ನ ಹೃದಯಂತರಾಳದಿಂದ جزك الله خيرا ಎಂದು ಹೇಳುತ್ತಾ ಅಲ್ಲಾಹುತಾಲ ನಮಗೆಲ್ಲರಿಗೂ ಸನ್ಮಾರ್ಗದ ಹಾದಿಯಲ್ಲಿ ನಡೆಯಲು ಇಲ್ಮ್ ಕಲಿಯುವ ಭಾಗ್ಯವನ್ನು ಕರುಣಿಸಲಿ امين
ಇಷ್ಟು ಹೇಳಿ ನನ್ನ ಈ ಚಿಕ್ಕ ಅಹಂಕಾರವು ಇಲ್ಮಿನಿಂದ ಬದಲಾಯಿತು ಎಂದು ಹೇಳಿ ಮುಗಿಸುತ್ತಿದ್ದೇನೆ..

✍🏻ಆಯಿಷಾ ರಿಯಾಜ್..
(ಅನ್ನೂರಿಯ್ಯ ವಿದ್ಯಾರ್ಥಿನಿ)

ಈ ಸಂದೇಶವನ್ನು ಎಡಿಟ್(Edit) ಮಾಡಿ, ಹೆಸರು ಬದಲಿಸಿ ಇತರೆ ಗ್ರೂಪ್‌ಗಳಿಗೆ/ಇತರರಿಗೆ ಕಳುಹಿಸುವುದು ಸಮ್ಮತಾರ್ಹವಲ್ಲ. ಅತೃಪ್ತಿದಾಯಕವಾಗಿದೆ. ಇಂತಹ ಕಾರ್ಯಗಳನ್ನು ಅಲ್ಲಾಹನು ಮೆಚ್ಚಲಾರನು.
ಅಲ್ಲಾಹನು ನಮ್ಮೆಲ್ಲರ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಎಲ್ಲಾ ವಿಪತ್ತುಗಳಿಂದ ನಮ್ಮನ್ನು ಕಾಪಾಡಲಿ
آمیـــــــــــــن یارب العالمین ದುಆಃ ಇರಲಿ ಸದಾ

ಇನ್ನಷ್ಟು ಇಸ್ಲಾಮಿಕ್ ವಿಷಯಗಳನ್ನು, ಆರೋಗ್ಯ, ನಮಾಝ್ ವೇಳಾಪಟ್ಟಿ ಹಾಗೂ ಇನ್ನಿತರ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:

ᴀɴɴᴜʀɪʏᴀ ꜱʜᴀʀɪᴀᴛʜ ᴀᴄᴀᴅᴇᴍʏ
ɴᴏᴏʀᴜʟꜰᴀʟᴀʜ ɪꜱʟᴀᴍɪᴄ ʟɪʙʀᴀʀʏ

Leave a Comment

Your email address will not be published. Required fields are marked *

You cannot copy content of this page