ಇದು ಕರುಣೆಯ ಮೋಡವಲ್ಲ, ಇದು ನಿಜವಾದ ದೇವ ಯಾತನೆಯಾಗಿದೆ

ಇದು ಕರುಣೆಯ ಮೋಡವಲ್ಲ, ಇದು ನಿಜವಾದ ದೇವ ಯಾತನೆಯಾಗಿದೆ

ಆದ್ ಸಮುದಾಯವು ಮಳೆಯನ್ನು ನಿರೀಕ್ಷಿಸುತ್ತ ಆಕಾಶದತ್ತ ದೃಷ್ಟಿ ಹಾಯಿಸಲಾರಂಭಿಸಿದ್ದರು. ಅವರ ನಾಡಿನಲ್ಲಿ ಮಳೆಯಾಗುತ್ತಿರಲಿಲ್ಲ, ಮೋಡವೂ ಗೋಚರಿಸುತ್ತಿರಲಿಲ್ಲ. ಅವರು ಮಳೆಗಾಗಿ ಚಡಪಡಿಸುತ್ತಿದ್ದರು.
ಒಂದು ದಿನ ಆಕಾಶದಲ್ಲಿ ಮೋಡ ತಮ್ಮತ್ತ ಬರುವುದನ್ನು ನೋಡಿದರು. ಅವರು ಸಂತುಷ್ಟರಾಗಿ ಕೇಕೆ ಹಾಕಿದರು. ಸಂಭ್ರಮದಿಂದ ಕುಣಿದಾಡಿದರು. ಅವರು ಮೋಡ! ಮೋಡ! ಎಂದು ಬೊಬ್ಬೆ ಇಡತೊಡಗಿದರು. ಆದರೆ ಹೂದ್ ಅಲೈಹಿಸ್ಸಲಾಂರವರಿಗೆ, ಈ ಮೋಡ ಕೇವಲ ಮಳೆಯಲ್ಲ. ಅದು ಜನರ ದುಷ್ಕೃತ್ಯಗಳಿಗೆ ಸಿಗುವ ಶಿಕ್ಷೆ, ದೇವಯಾತನೆಯ ಸಮಯ ಸಮೀಪಿಸಿದ ಎಂದು ಅರಿವಾಯಿತು. ಅವರು ಜನರೊಂದಿಗೆ ಹೇಳಿದರು.
ಇದು ಕರುಣೆಯ ಮೋಡವಲ್ಲ. ಇದು ನಿಜವಾದ ದೇವಯಾತನೆಯಾಗಿದೆ.
ಆ ಕೂಡಲೇ ಭೀಕರ ಸುಂಟರಗಾಳಿ ಬೀಸಲಾರಂಭಿಸಿತು. ಜನರು ಭಯಗ್ರಸ್ತರಾದರು. ಅವರು ಅಂತಹ ಸುಂಟರಗಾಳಿಯನ್ನು ಆ ತನಕ ನೋಡಿರಲಿಲ್ಲ. ಅವರ ಮನೆಮಠಗಳು ಬೀಳಲಾರಂಭಿಸಿದವು. ಮರ ಮಟ್ಟುಗಳು ನೆಲಕ್ಕುರುಳಿದವು ಪ್ರಾಣಿ ಪಕ್ಷಿಗಳ ನಿರ್ಮೂಲನವಾದವು. ಮರುಭೂಮಿಯ ಮರುಳು ಗಾಳಿಯ ಜೊತೆ ತುಂಬಿಕೊಂಡಿತು. ಸಂಪೂರ್ಣ ಪ್ರದೇಶ ಕತ್ತಲಾಗಿ ಜನರು ಪರಸ್ಪರ ಕಾಣದಂತಾದರು. ಭಯಗ್ರಸ್ತರಾ ಜನರು ಅಳಿದುಳಿದ. ಮನೆಗೆ ನುಗ್ಗಿ ಬಾಗಿಲು ಮುಚ್ಚಿಕೊಂಡರು. ಮಕ್ಕಳು ತಮ್ಮ ತಾಯಂದಿರ ಮಡಿಲು ಹತ್ತಿದರು. ಜನರು ಗೋಡೆಗಳ ಮೇಲೇರಿದರು. ಮಕ ಚೀರಾಟ ಸ್ತ್ರೀಯರ ತೊಳಲಾಟಗಳ ಮಧ್ಯೆ ಅವರು ಸಹಾಯಕ್ಕಾಗಿ ದೇವರ ಪ್ರಾರ್ಥಿಸಲಾರಂಭಿಸಿದರು:
ಅಲ್ಲಾಹನೇ ಯಾರ ಮೇಲಾದರೂ ಕರುಣೆ ತೋರುವ ಹೊರತು ಇಂದು ಯಾರೂ ಅವನ ಯಾತನೆಯಿಂದ ರಕ್ಷಿಸುವವ ರಿಲ್ಲ.
ಈ ಭೀಕರ ಅವಸ್ಥೆಯು ಎಂಟು ದಿನ ಮತ್ತು ಏಳು ರಾತ್ರಿಗಳ ಕಾಲ ನಿರಂತರವಾಗಿ ಅವರನ್ನಾವರಿಸಿತ್ತು. ಜನರು ತರಗೆಲೆಗಳಂತೆ ನೆಲಕ್ಕುರುಳಿದರು. ಅದು ಮಹಾ ಭೀಕರ ಅವಸ್ಥೆಯಾಗಿತ್ತು, ದುರಹಂಕಾರಿಗಳಾಗಿದ್ದ ಆ ಜನರು ಈಗ ಸತ್ತು ಹೆಣಗಳಾಗಿ ಬಿಟ್ಟಿದ್ದರುಅವರ ಬೃಹತ್ ಬಂಗಲೆಗಳು ನಾಮಾವಶೇಷವಾಗಿ ಆಗ ಅವು ಕೇವಲ ರಣ ಹದ್ದುಗಳ ನೆಲೆವೀಡಾಗಿ ಮಾರ್ಪಟ್ಟಿದ್ದವು, ಹೂದ್ ಅಲೈಹಿಸ್ಸಲಾಂ ಮತ್ತು ಸತ್ಯವಿಶ್ವಾಸಿಗಳನ್ನು ಅಲ್ಲಾಹನು ರಕ್ಷಿಸಿದನು. ಆದ್ ಸಮುದಾಯ ತನ್ನ ದುಷ್ಕೃತ್ಯ ಮತ್ತು ಸತ್ಯನಿಷೇಧದ ಫಲವಾಗಿ ಸಂಪೂರ್ಣ ನಾಶವಾಯಿತು
ಕೇಳಿರಿ! ಆದ್ ಜನಾಂಗವು ತನ್ನ ಪ್ರಭುವನ್ನು ನಿರಾಕರಿಸಿತು. ಕೇಳಿರಿ! ಹೂದ್ (ಅ)ರ ಜನಾಂಗದವರಾದ ಆದ್ ದೂರಕ್ಕೆ ಎಸೆಯಲ್ಪಟ್ಟಿರು. (11:60)

ಕೆಎಂ ಜಲೀಲ್ ಕುಂದಾಪುರ

Leave a Comment

Your email address will not be published. Required fields are marked *

You cannot copy content of this page