ಸ್ತ್ರೀಯರ ಲಜ್ಜೆಯೆಂಬ ಗೋಡೆ ಕುಸಿದುಬಿಟ್ಟರೆ
ಲಜ್ಜೆ ಸ್ತ್ರೀಯರಿಗೆ ಶೋಭೆ. ಲಜ್ಜೆ ಯ ಮೂಲಕ ಮಹಿಳೆಯರು ತಮ್ಮ ಜೀವನವನ್ನು ಕಾಪಾಡಬಲ್ಲರು. ಅದರಿಂದಾಗಿ ಅವಳ ದೈನಂದಿನ ಕರ್ಮಗಳು ಸರಾಗವಾಗಿ ನಡೆಯುತ್ತದೆ. ಅದೇ ವೇಳೆ ಲಜ್ಜೆ ಯೆಂಬ ಬೇಲಿಯ ಹೊರಕ್ಕೆ ಅವಳು ಬಂದುಬಿಟ್ಟರೆ ಅವಳನ್ನು ಕಟ್ಟಿ ಹಾಕಲಾಗುವುದಿಲ್ಲ. ಅವಳನ್ನು ಜೋಪಾನವಾಗಿಡಲು ನಿನ್ನಿಂದ ಸಾಧ್ಯವೇ ಇಲ್ಲ. ನೋಡಿರಿ. ಗಿಡಗಳಿಂದ ಹೂವು ಬಿರಿದ ನಂತರ ಅದರ ಸುವಾಸನೆ ಹೊರಸೂಸಬಾರದೆಂದು ಗ್ರಹಿಸಿ ಅದರ ಸುತ್ತಲೂ ಆವರಣ ಗೋಡೆ ಕಟ್ಟಿ ಏನು ಫಲ? ಆವರಣ ಗೋಡೆ ದಾಟಿ ಅದರ ಸುವಾಸನೆ ಹೊರ ಬಂದು ಎಲ್ಲರಿಗೂ ಸುಗಂಧ ನೀಡುತ್ತದೆ. ಅದೇ ರೀತಿ ಲಜ್ಜೆಯೆಂಬ ಆವರಣ ಗೋಡೆ : ಧ್ವಂಸವಾದರೆ ಆ ಸ್ತ್ರೀಯನ್ನು ಕಟ್ಟಿ ಹಾಕಲು ಯಾರಿಂದಲೂ : ಸಾಧ್ಯವಾಗುವ ಕೆಲಸವಲ್ಲ. ಆದುದರಿಂದ ಸ್ತ್ರೀಯರು ಲಜ್ಜೆಯಿಲ್ಲದೆ ತಿರುಗಾಡುವುದು ಸಲ್ಲ.