ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ?

ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ? ಈ ಸಮಸ್ಯೆಯಿಂದ ಪಾರಾಗುವುದು ಹೇಗೆ?

ಹೊಟ್ಟೆ ಉಬ್ಬರ ಸಮಸ್ಯೆಯನ್ನು ನೀವು ಕೇವಲ ಗ್ಯಾಸ್ ಎಂದು ಪರಿಗಣಿಸಿದರೆ ಅದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಲ್ಲದು.
ದಿನನಿತ್ಯದ ಕಾರ್ಯಗಳು ಸರಿಯಾಗಿ ಸಾಗಬೇಕಾದರೆ ಆಗ ಆರೋಗ್ಯವು ಸರಿಯಾಗಿ ಇರಬೇಕಾಗುತ್ತದೆ. ಕೆಲವೊಂದು ಸಲ ಹೊಟ್ಟೆ ಉಬ್ಬರದ ಸಮಸ್ಯೆಯು ಕಾಡುವುದು ಇದೆ. ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಹೊಟ್ಟೆ ತುಂಬಿದಂತೆ ಆಗಿ, ನೋವು ಕೂಡ ಉಂಟಾಗಬಹುದು.
ಆಹಾರ ಅಜೀರ್ಣವಾಗುವುದು ಹಾಗೂ ಕೆಲವರ ಜೀವನಶೈಲಿಯಿಂದಾಗಿ ಇದು ಬರಬಹುದು. ಆದರೆ ನಿರಂತರವಾಗಿ ಇದು ಕಾಣಿಸಿಕೊಳ್ಳುತ್ತಿದ್ದರೆ ಆಗ ಇದು ಖಂಡಿತವಾಗಿಯೂ ಯಾವುದಾದರೂ ಒಂದು ಅನಾರೋಗ್ಯದ ಸಮಸ್ಯೆಯಾಗಿರಬಹುದು. ಹೊಟ್ಟೆ ಉಬ್ಬರಕ್ಕೆ ಕಾರಣಗಳು ಏನು, ಜೀರ್ಣಕ್ರಿಯೆ ಆರೋಗ್ಯ ಹೆಚ್ಚಿಸಲು ಕೆಲವೊಂದು ಕಾರಣಗಳನ್ನು ತಿಳಿದುಕೊಳ್ಳಿ.
ಕೆಟ್ಟ ಆಹಾರ ಕ್ರಮ:
ಕೊಬ್ಬು, ನಾರಿನಾಂಶ ಅಥವಾ ಕೃತಕ ಸಿಹಿ ಬಳಸಿಕೊಂಡಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ವಿಳಂಬವಾಗಬಹುದು ಮತ್ತು ಇದರಿಂದ ಗ್ಯಾಸ್ ನಿರ್ಮಾಣವಾಗಬಹುದು. ಅವಸರದಿಂದ ತಿನ್ನುವುದು, ಚೂಯಿಂಗ್ ಗಮ್ ಜಗಿಯುವುದು ಅಥವಾ ತಂಪು ಪಾನೀಯಗಳನ್ನು ಸೇವನೆ ಮಾಡುವುದರಿಂದ ಹೆಚ್ಚಿನ ಗಾಳಿಯು ಜೀರ್ಣಾಂಗ ವ್ಯವಸ್ಥೆಯೊಳಗೆ ತಲುಪುವುದು. ಇದು ಜೀಣಾಂಗ ಕಾರ್ಯಕ್ಕೆ ಅಡ್ಡಿ ಉಂಟು ಮಾಡುವ ಪರಿಣಾಮವಾಗಿ ಹೊಟ್ಟೆ ಉಬ್ಬರ ಉಂಟಾಗಬಹುದು. ಸಣ್ಣ ಪ್ರಮಾಣದ, ಸಮತೋಲಿತ ಆಹಾರ ಸೇವನೆ ಮಾಡಿದರೆ ಒಳ್ಳೆಯದು.
ಆಹಾರ ಅಸಹಿಷ್ಣುತೆ:
ಲ್ಯಾಕ್ಟೋಸ್ ಅಸಹಿಷ್ಣುತೆ, ಗ್ಲುಟೇನ್ ಸೂಕ್ಷ್ಮತೆ ಅಥವಾ ಇತರ ಆಹಾರ ಸೂಕ್ಷ್ಮತೆ ಹೊಂದಿದ್ದರೆ ಆಗ ಇದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುವುದು. ಲ್ಯಾಕ್ಟೋಸ್ ಅಥವಾ ಗ್ಲುಟೇನ್ ಸೂಕ್ಷ್ಮತೆ ಇರುವವರು ಹಾಲಿನ ಉತ್ಪನ್ನಗಳು, ಗ್ಲುಟೇನ್ ಇರುವ ಧಾನ್ಯಗಳನ್ನು ಸೇವನೆ ಮಾಡಿದರೆ ಆಗ ಹೊಟ್ಟೆ ಉಬ್ಬರ ಕಂಡುಬರುವುದು.
ಜೀರ್ಣಕ್ರಿಯೆ ಸಮಸ್ಯೆ:
ಕರುಳಿನ ಕೆರಳಿಸುವ ಲಕ್ಷಣಗಳು(ಐಬಿಎಸ್), ಕರುಳಿನ ಉರಿಯೂತದ ಕಾಯಿಲೆ(ಐಬಿಡಿ) ಅಥವಾ ಜಠರ ಹಿಮ್ಮುಖ ಹರಿವು(ಜಿಇಆರ್ ಡಿ) ಸಮಸ್ಯಗಳು ಇದ್ದರೆ ಆಗ ಇದು ಹೊಟ್ಟೆ ಉಬ್ಬರ, ಹೊಟ್ಟೆ ನೋವು ಮತ್ತು ಹೊಟ್ಟೆಯಲ್ಲಿ ಉರಿಯೂತವನ್ನು ಉಂಟು ಮಾಡುವುದು.
ಒತ್ತಡ:
ಅತಿಯಾದ ಒತ್ತಡವಿದ್ದರೆ ಆಗ ಇದು ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಒತ್ತಡವು ಹೊಟ್ಟೆಯ ಸೂಕ್ಷ್ಮತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಇದರಿಂದ ಹೊಟ್ಟೆ ಉಬ್ಬರ ಉಂಟಾಗುವುದು. ಇದಕ್ಕಾಗಿ ಯೋಗ, ಧ್ಯಾನ ಮಾಡಿದರೆ ಅದರಿಂದ ಹೊಟ್ಟೆ ಉಬ್ಬರವು ಬರುವುದು.
ದ್ರವ ಶೇಖರಣೆ:
ಋತುಚಕ್ರ ಮತ್ತು ಗರ್ಭಧಾರಣೆ ಸಂದರ್ಭದಲ್ಲಿ ಆಗುವಂತಹ ಹಾರ್ಮೋನ್ ಬದಲಾವಣೆಯಿಂದಾಗಿ ದ್ರವ ಶೇಖರಣೆ ಉಂಟಾಗಿ ಅದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುವುದು. ಅತಿಯಾಗಿ ಸೋಡಿಯಂ ಸೇವನೆ ಮಾಡಿದರೂ ಅದು ದೇಹದಲ್ಲಿ ದ್ರವದ ಸಮತೋಲನಕ್ಕೆ ಕಾರಣವಾಗಿ ಹೊಟ್ಟೆ ಉಬ್ಬರ ಉಂಟಾಗಬಹುದು. ಕೆಲವು ಔಷಧಿಗಳು, ಗರ್ಭನಿರೋಧಕ ಮಾತ್ರೆಗಳ ಅಡ್ಡ ಪರಿಣಾಮದಿಂದಲೂ ಹೊಟ್ಟೆ ಉಬ್ಬರ ಉಂಟಾಗಬಹುದು.
ಲಕ್ಷಣಗಳನ್ನು ಗುರುತಿಸಿ:
ಹೊಟ್ಟೆಯ ಗಾತ್ರವು ದೊಡ್ಡದಾಗಬಹುದು.
ಅತಿಯಾಗಿ ಹೂಸು ಹೋಗುವುದು ಅಥವಾ ಹೊಟ್ಟೆಯಲ್ಲಿ ಗ್ಯಾಸ್ ನಿಂತತೆ ಆಗುವುದು.
ಹೊಟ್ಟೆ ಉಬ್ಬರದಿಂದ ಸೆಳೆತ, ಅಹಿತಕರ ಅಥವಾ ತೀವ್ರ ನೋವು ಕಾಣಿಸಬಹುದು.
ಕೆಲವರಿಗೆ ಹೊಟ್ಟೆಉಬ್ಬರದಿಂದಾಗಿ ಮಲಬದ್ಧತೆ ಅಥವಾ ಅತಿಸಾರವು ಕಂಡುಬರಬಹುದು.
ಹೊಟ್ಟೆ ಉಬ್ಬರ ಸಮಸ್ಯೆ ನಿವಾರಣೆ ಮಾಡುವುದು ಹೇಗೆ?:
ಸಮಾಧಾನವಾಗಿ ಊಟ ಮಾಡಿ
ಸಮತೋಲಿತ ಆಹಾರ ಸೇವಿಸಿ
ದೇಹವನ್ನು ಹೈಡ್ರೇಡ್‌ ಆಗಿಡಿ
ಯಾವ ಆಹಾರವೆಂದು ಸಮಸ್ಯೆ ಬರುವುದು ಎಂದು ಗುರುತಿಸಿ
ಒತ್ತಡ ನಿಭಾಯಿಸಿ
ಪ್ರೊಬಯೋಟಿಕ್ ಆಹಾರಗಳನ್ನು ಸೇವನೆ ಮಾಡಿ.
ವೈದ್ಯರ ಬಳಿಗೆ ಯಾವಾಗ ಹೋಗಬೇಕು:
ಹೊಟ್ಟೆ ಉಬ್ಬರವು ತೀವ್ರವಾಗಿದ್ದರೆ ಆಗ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಇದು ಯಾವುದೇ ಅನಾರೋಗ್ಯದ ಲಕ್ಷಣವಾಗಿರಬಹುದು. ಹೊಟ್ಟೆ ಉಬ್ಬರದ ಜತೆ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ಆಗ ವೈದ್ಯರನ್ನು ಭೇಟಿ ಮಾಡಿ.

Leave a Comment

Your email address will not be published. Required fields are marked *

You cannot copy content of this page